ರಾಮು ಅವರ `ಎಲಕ್ಷನ್` ಮಾಲಾಶ್ರೀ `ಸೆಲಕ್ಷನ್`
Posted date: 07 Mon, Jan 2013 ? 08:47:01 AM

ಕನ್ನಡದ ಪ್ರತಿಷ್ಠಿತ ನಿರ್ಮಾಪಕ ರಾಮು ಅವರ ‘ಎಲಕ್ಷನ್’ ಭರ್ಜರಿ ಆಗಿ ಚಿತ್ರೀಕರಣ ಸಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರದಾರಿ ಅವರ ಮಡದಿ ಮಾಲಾಶ್ರೀ ಅವರು ಸ್ಪೆಷಲ್ ‘ಎಲೆಕ್ಷನ್’ ಅಧಿಕಾರಿ ಆಗಿ ಚಿತ್ರದಲ್ಲಿ ಒಳ್ಳೆಯ ‘ಸೆಲಕ್ಷನ್’ ಮಾಡುತ್ತಿದ್ದಾರೆ, ಅವೆಲ್ಲವೂ ದೃಶ್ಯಗಳ ಮೂಲಕ  ತಿಳಿದುಬಂದಿದೆ.

ಖಡಕ್ ಅಧಿಕಾರಿ ಆಗಿ ಇಂದಿರಾ (ಮಾಲಾಶ್ರೀ) ಚಿತ್ರಕ್ಕಾಗಿ ಬಿರುಸಿನ ಸನ್ನಿವೇಶಗಳಲ್ಲಿ ಪಾಲ್ಗೊಂಡಿದ್ದಾರೆ. ಮೊದಲಿಗೆ ರಾಜ್ಯಪಾಲರಾದ ಜಿ.ಕೆ. ಗೋವಿಂದ ರಾವು ಅವರನ್ನು ಬೇಟಿ ಮಾಡಿ ಆಮೇಲೆ ಅವರನ್ನು ಹತ್ಯೆ ಮಾಡಲು ಬರುವ ವ್ಯಕ್ತಿ (ಚೆನ್ನ ಕೃಷ್ಣ) ಹಾಗೂ ಅವರ ಗುಂಪಿನೊಂದಿಗೆ ಸೆಣಸಾಡಿ ಪೋಲೀಸು ಇಲಾಖೆಗೆ ಒಪ್ಪಿಸುವರು. ಈ ದೃಶ್ಯವನ್ನು ನೈಸ್ ರಸ್ತೆಯಲ್ಲಿ ಸಾಹಸ ನಿರ್ದೇಶಕ ಫಳಣಿ ರಾಜ್ ಚಿತ್ರೀಕರಿಸಿಕೊಂಡರು. ಅದಾದ ನಂತರ ಗೃಹ ಮಂತ್ರಿಯ ಭಾವಮೈದ (ಶರಣ್) ಹಾಕುವ ಸಾವಲಿಗೆ ಇಂದಿರಾ ಖಾಲಿ ಹಾಳೆಯಲ್ಲಿ ರುಜು ಮಾಡಿ ಬಿಸಾಕಿ ಬರುವ ದೃಶ್ಯವನ್ನು, ತದನಂತರ ಸ್ವಾಭಿಮಾನಿ ಪಕ್ಷದ ವ್ಯಕ್ತಿ (ಶ್ರೀನಿವಾಸಮೂರ್ತಿ) ಅವರೊಂದಿಗೆ ಮಾತು, ಆಮೇಲೆ ನೇತಾಜಿ ಸರ್ಕಲ್ ಬಳಿ ಆದ ಟ್ರಾಫಿಕ್ ಜಾಮ್ ಅನ್ನು ತಡೆಗಟ್ಟುವ ಸನ್ನಿವೇಶಗಳನ್ನು ಛಾಯಾಗ್ರಾಹಕ ರಾಜೇಶ್ ಖಟ್ಟ ಅವರ ನೇತೃತ್ವದಲ್ಲಿ ಸೆರೆಹಿಡಿದರು ನಿರ್ದೇಶಕ ಎನ್ ಓಂ ಪ್ರಕಾಷ್ ರಾವು.

ಕನ್ನಡ ಚಿತ್ರರಂಗದ ಕನಸಿನ ರಾಣಿ ಇಂದು ಸಾಹಸ ಪ್ರವೃತ್ತಿಯ ಚಿತ್ರಗಳಿಂದ ‘ಆಕ್ಷನ್ ರಾಣಿ’ಆಗಿ ಪ್ರಖ್ಯಾತರಾಗಿರುವ ಮಾಲಾಶ್ರೀ ಅವರು ‘ಎಲೆಕ್ಷನ್’ ಚಿತ್ರದಲ್ಲಿ ಇನ್ನೂ ಹಲವಾರು ಸಾಹಸದ ಜೊತೆಗೆ ಸಮಾಜಕ್ಕೆ ಬೇಕಾದ ಇಂಜೆಕ್ಷನ್ ಸಹ ನೀಡಲಿದ್ದಾರೆ.

ಸಾಹಸ ಚಿತ್ರಗಳ ಸರ್ದಾರ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ಓಂ ಪ್ರಕಾಷ್ ರಾವು ಅವರು ರಾಮು ಅವರ ಬ್ಯಾನರ್ಗಾಗಿ ‘ಲಾಕ್ ಅಪ್ ಡೆತ್, ಸಿಂಹದ ಮರಿ, ಏ ಕೆ ೪೭, ಕಲಾಸಿಪಾಳ್ಯ ಹಾಗೂ ‘ಕನ್ನಡದ ಕಿರಣ್ ಬೇಡಿ’ ಸಿನೆಮಾಗಳನ್ನು ನಿರ್ದೇಶನ ಮಾಡಿದವರು. ‘ಏಲೆಕ್ಷನ್’ ಚಿತ್ರಕ್ಕೆ ರಾವು ಅವರೇ ಚಿತ್ರಕಥೆ ಬರೆದಿದ್ದಾರೆ.

ಕನ್ನಡ ಚಿತ್ರರಂಗದ ನಾದ ಬ್ರಹ್ಮ ಸಾಹಿತ್ಯದ ಸರದಾರ ರಾಷ್ಟ್ರ ಪ್ರಶಸ್ತಿ ವಿಜೇತ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಹಾಗೂ ಸಾಹಿತ್ಯವನ್ನು ಒದಗಿಸಿದ್ದಾರೆ. ರಾಜೇಶ್ ಖಟ್ಟ ಅವರ ಛಾಯಾಗ್ರಹಣ, ಮನೋಹರ್ ಅವರ ಸಂಕಲನ, ಆನಂದ್ ಅವರ ಸಂಭಾಷಣೆ, ಸರಿಗಮ ವಿಜಿ ಹಾಗೂ ಸೋಮರಜ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಪೋಷಕ ಪತ್ರಗಳಲ್ಲಿ ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೊ ನಾಗರಾಜ್, ಸುಚಿಂದ್ರಪ್ರಸಾದ್, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಬುಲ್ಲೆಟ್ ಪ್ರಕಾಷ್, ಶೋಬಾರಾಜ್, ಪ್ರದೀಪ್ ರಾವತ್, ಹನುಮಂತೆ ಗೌಡ, ಜಿ.ಕೆ.ಗೋವಿಂದ ರಾವು, ಸುಚಿತ್ರಾ, ದಿವ್ಯ, ಶ್ರವಣ್, ಶಂಕೆರ್ಣರಾಯಣ್, ಕೀರ್ತಿರಾಜ್, ಮೈಕೊ ಶಿವು, ರವಿ, ವಿಕಾಸ್ ಹಾಗೂ ಇತರರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed